Home
>>
Departments
>>
Department of Languages
>>
Department of Kannada
Department of Kannada
ಗುರಿ - "ಭಾಷಾ ಪರಿವಾರ"
ವಿ ಇ ಟಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗಕ್ಕೆ ಸುದೀರ್ಘವಾದ ಇತಿಹಾಸವಿದೆ ಕಾಲೇಜು ಪ್ರಾರಂಭದಿಂದ ಇಲ್ಲಿಗೆ ೨೭ ವರ್ಷಗಳು ಪೂರೈಸಿದೆ. ವಿಭಾಗದ ಎಲ್ಲಾ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದೆ. ಸಾಹಿತ್ಯ ವಲಯದಲ್ಲಿ ಪುಸ್ತಕಗಳನ್ನು ರಚಿಸಿ ಸಾಹಿತಿಗಳ -ವಿದ್ವಾಂಸರ ಮೆಚ್ಚುಗೆಯನ್ನು ಪಡೆದಿದೆ. ಆಧುನಿಕೆತೆಯ ಅಬ್ಬರದ ನಡುವೆಯೂ ಯಾಂತ್ರಿಕವಾಗುತ್ತಿರುವ ವಿದ್ಯಾರ್ಥಿಗಳ ಮನಸ್ಸಿಗೆ ಕನ್ನಡ ಸಾಹಿತ್ಯದ ಎಲ್ಲಾ ಆಯಾಮಗಳ ಪರಿಚಯವನ್ನು ಮಾಡಿಕೊಡುತ್ತಾ ಬಂದಿದೆ. ಸಾಹಿತ್ಯಿಕ ಸ್ಪರ್ಧೆಗಳು, ಕಾರ್ಯಾಗಾರಗಳು ,ಪ್ರಕಟಣೆಗಳು ವಿಚಾರಸಂಕಿರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕನ್ನಡ ವಿಭಾಗದ ವಿಷಯ ಉದ್ದೇಶಗಳನ್ನು ಪರಿಚಯಿಸುವುದು. ಕನ್ನಡ ಭಾಷೆಯನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಪ್ರೋತ್ಸಾಹಿಸಿಕೊಂಡು ಬಂದಿದೆ.
ದೃಷ್ಟಿ
- ಮೌಲ್ಯಾಧಾರಿತ ಶಿಕ್ಷಣ ಮತ್ತು ಕೌಶಲ್ಯ ಅಭಿರುದ್ಧಿಯ ಮೂಲಕ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು
- ಉನ್ನತ ಶಿಕ್ಷಣದ ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದು
- ಸಂವಹನ ಕೌಶಲ್ಯಗಳನ್ನು ಪಡೆದುಕೊಳ್ಳುವುದು
ಮಿಷನ್
- ಮಾನವ ಜೀವನವನ್ನು ಸಮೃದ್ಧಿಗೊಳಿಸಲು ಮತ್ತು ಸಬಲೀಕರಣಗೊಳಿಸಲು ಸಮಗ್ರ ಶಿಕ್ಷಣವನ್ನು ಒದಗಿಸಲು ಪ್ರೇರೇಪಿಸುವುದು
- ಕೇಳುವ ,ಮಾತನಾಡುವ ,ಓದುವ ,ಬರೆಯುವ ಕೌಶಲ್ಯಗಳನ್ನು ಅಭಿರುದ್ಧಿಪಡಿಸಲು ಸಹಕರಿಸುವುದು (L S R W )
ಉದ್ದೇಶಗಳು
- ಸಾಹಿತ್ಯದ ಮೂಲಕ ನೈತಿಕ ಮತ್ತು ಬಹುಸಂಸ್ಕೃತಿಯ ಮೌಲ್ಯಗಳನ್ನು ಉತ್ತೇಜಿಸುವುದು
- ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸಲು ಕ್ರಿಯಾತ್ಮಕ ಸಮತೋಲನವನ್ನು ಸಾಧಿಸುವುದು
- ವಿದ್ಯಾರ್ಥಿಗಳ ಮತ್ತು ಶಿಕ್ಷಕರಿಗಾಗಿ ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುವುದು
- ವಿದ್ಯಾರ್ಥಿಗಳ ಸಂಕೀರ್ಣತೆಗಳನ್ನು ತಗ್ಗಿಸಲು ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು
ಶಿಕ್ಷಕರ ಪಟ್ಟಿ:
Narayanaswamy S G
MA, PGDJ (M.Phil)
Vice Principal
Dr. Rangaswamy H T
Ph.D, M.Phil, MA, K-Set
Assoc. Prof
Sangeetha B P
MA B.Ed
Asst. Prof